ಅರವಿಂದ ಎಂ. ನೆಗಳೂರ್ ಅವರು ವಾಣಿಜ್ಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಸುಮಾರು ಮೂರು ದಶಕಗಳಿಂದ ಬೆಂಗಳೂರಿನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ದ್ವಿ-ಭಾಷಾ ಕಾನೂನು ನಿಯತಕಾಲಿಕೆಯನ್ನು ನಡೆಸಿದ ಅನುಭವ ಹೊಂದಿದ ಇವರು 'Legally Speaking' ಎಂಬ ಬ್ಲಾಗ್ ಕೂಡ ಹೊಂದಿದ್ದಾರೆ. ಮಾಧ್ಯಮಗಳಲ್ಲಿ ಕಾನೂನು ಚರ್ಚೆಗಳಲ್ಲಿ ಪಾಲ್ಗೊಳ್ಳುವ ಇವರು ಕ್ರೀಡೆ, ವನ್ಯಜೀವಿ ಮತ್ತು ಪಕ್ಷಿ ಛಾಯಾಗ್ರಹಣದಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ.