ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 11: “ನದಿ ನೀರು ಹಂಚಿಕೆ” – ಶ್ರೀ ಮೋಹನ ಕಾತರಕಿ

ಉಪನ್ಯಾಸಕರು : ಶ್ರೀ ಮೋಹನ ಕಾತರಕಿ, ಹಿರಿಯ ವಕೀಲರು, ಭಾರತದ ಸರ್ವೋಚ್ಚ ನ್ಯಾಯಾಲಯ

ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು ದೇಶದ 75ನೇ ಸ್ವಾತಂತ್ರ ಅಂಗವಾಗಿ ಆಯೋಜಿಸಲಾದ ವಿಚಾರ ಕಲರವದಲ್ಲಿ ಜೂನ್ 18 ರಂದು ಉಪನ್ಯಾಸ ನೀಡಿದ್ದು ಶ್ರೀ ಮೋಹನ ಕಾತರಕಿ ಅವರು. “ನದಿ ನೀರು ಹಂಚಿಕೆ” ಎಂಬ ವಿಷಯವಾಗಿ ಉಪನ್ಯಾಸ ನೀಡಿದ ಶ್ರೀ ಮೋಹನ ಕಾತರಕಿ ಅವರು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರು.

ಮಾನ್ಯರು ತಮ್ಮ ಮಾತಿನ ಪ್ರಾರಂಭದಲ್ಲಿ ತಮ್ಮನ್ನ ತಾವು , ಕನ್ನಡಿಗರಾಗಿದ್ದರು ಸಹ, ಕಳೆದ 35 ವರ್ಷದಿಂದ ರಾಷ್ಟ್ರದ ರಾಜಧಾನಿ ಆಗಿರುವ ದೆಹಲಿ ಮತ್ತು ಇತರೆ ರಾಜ್ಯಗಳಲ್ಲಿ ಇರುವುದರಿಂದ ತಾವು ಕನ್ನಡವನ್ನು ಮಾತನಾಡಕ್ಕೆ ಬಳಸಿದರೂ ಸಹ, ಅಲ್ಲಿನ ವ್ಯವಹಾರಿಕ ಭಾಷೆ ಇಂಗ್ಲಿಷ್ ಮತ್ತು ಹಿಂದಿ ಆಗಿರುವುದರಿಂದ, ಕನ್ನಡ ಬಳಸಿ ಭಾಷಣೆ ಮಾಡುವುದಕ್ಕೆ ಅಷ್ಟೊಂದು ಪರಿಣಿತಿ ಇಲ್ಲವೆಂದು, ಆದರೂ ಆದಷ್ಟು ಕನ್ನಡದಲ್ಲೇ ವಿಚಾರಗಳನ್ನು ತಿಳಿಸಿಕೊಡಲು ಪ್ರಯತ್ನಿಸುವುದಾಗಿ ಹೇಳುತ್ತಾ ತಮ್ಮ ಮಾತನ್ನು ಆರಂಭಿಸಿದರು.

ಕಾತರಕಿ ಅವರು ನದಿಗಳ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ, ಕಾನೂನಿನ ದೃಷಿಯಲ್ಲಿ ನದಿ ನೀರಿನ ಹಂಚಿಕೆಯ ವಿಷಯ ಸಂಕೀರ್ಣ ಹಾಗೂ ತಾಂತ್ರಿಕ ವಿಷಯಗಳಿಂದ ತುಂಬಿರುವುದರಿಂದ,  ವಿಚಾರವು ಸೂಕ್ಷ್ಮ ಹಾಗೂ ಸಂಕೀರ್ಣವಾಗಿದೆ ಎಂದರು.

ಜಗತ್ತಿನಾದ್ಯಂತ  1850 ನಂತರ ತಂತ್ರಜ್ಞಾನ ಅಭಿವೃದ್ಧಿ ಕಂಡಂತೆ ಅಣೆಕಟ್ಟುಗಳು ಸುಮಾರು ಸಂಖ್ಯೆಗಳಲ್ಲಿ ಕಟ್ಟಲ್ಪಟ್ಟವು, ನೀರಾವರಿ ಬೇಸಾಯವೂ ರೂಢಿಯಲ್ಲಿ ಬಂತು ಎಂದು ಹೇಳಿದರು. ಜೊತೆಗೆ ಭೂಮಂಡಲದಲ್ಲಿ ಮಾನವನ ಬಳಕೆಗೆ ಕೇವಲ 3% ನೀರು ಯೋಗ್ಯ ಆಗಿದ್ದರೂ ಬಳಸುವುದು ಕೇವಲ 1% ಎಂದು ತಿಳಿಸಿಕೊಟ್ಟರು. ಹಾಗಾಗಿ ನೀರಿನ ಕೊರತೆ ಉಂಟಾದಾಗ ನದಿ ನೀರಿನ ಹಂಚಿಕೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುತ್ತವೆ ಎಂದರು, ಕೊರತೆ ಒಂದೋ ಆ ಜಾಗದ ಕಾರಣದಿಂದ ಅಥವಾ ಒಂದು ಸಮಯದ ಕಾರಣದಿಂದ ಬರಬಹುದು ಎಂದರು. ದೊಡ್ಡ ಅಣೆಕಟ್ಟುಗಳ ಕಟ್ಟುವ ಮೊದಲು ನದಿ ಬಯಲು ಪ್ರದೇಶಗಳಲ್ಲಿ ಮಾತ್ರ ಹೇರಳವಾಗಿ ನೀರು ದೊರಕುತ್ತಾದ್ದರಿಂದ ಅಲ್ಲಿ ನೀರಾವರಿ ಬೇಸಾಯ ಆಗುತ್ತಿತ್ತು, ನಾಗರಿಕತೆಗಳು ಹುಟ್ಟಿಕೊಳ್ಳುತ್ತಿದ್ದವು. ಕಾವೇರಿ ನದಿಗೆ 1910 ರಲ್ಲಿ ಕೆ ಆರ್ ಎಸ್ ಆಣೆಕಟ್ಟು ಕಟ್ಟುವ ಮೊದಲು, ತಮಿಳುನಾಡಿನಲ್ಲೂ ಹೆಚ್ಚಿನ ಬೇಸಾಯ ಇತ್ತು, ಮತ್ತು ಮೇಲ್ನಾಡಿನಲ್ಲಿ ಕಡಿಮೆ ಇತ್ತು. ಇಲ್ಲಿ ಸಂಪತ್ತು ಹಂಚಿಕೆಯಲ್ಲಿ ವ್ಯತ್ಯಾಸವಿದ್ದರೂ ಸಹ ಅದು ಸಹಜವಾಗಿ ನದಿ ಹರಿವಿನಿಂದ ಉಂಟಾದದ್ದಾಗಿತ್ತು ಎಂದರು. ತದನಂತರದಲ್ಲಿ ಅಣೆಕಟ್ಟಿನ ತಂತ್ರಜ್ಞಾನ ಬೆಳೆದ ಮೇಲೆ, ನದಿ ಪಾತ್ರದ ಮೇಲೆ ಕೆಳಗೆ ವಾಸಿಸುವ ಜನರ ಮಧ್ಯದಲ್ಲಿ ಸಮಸ್ಯೆಗಳು ಬರಲಾರಂಭಿಸಿದವು ಎಂದು ವಿವರಿಸಿದರು. ಯಾವ ಜಾಗದಲ್ಲಿ ಅಣೆಕಟ್ಟುಗಳನ್ನು ಕಟ್ಟಬೇಕು, ಎಷ್ಟು ನೀರು ಹಿಡಿದಿಡಬೇಕು, ಮತ್ತು ಮಳೆ ಹೆಚ್ಚಾದರೂ, ಕಡಿಮೆಯಾದರೂ ಜನ – ಜೀವನವನ್ನು ಹಾಳು ಮಾಡದ ಹಾಗೆ ಹೇಗೆ ಅಣೆಕಟ್ಟುಗಳನ್ನು ಕಟ್ಟಬೇಕು ಎಂಬಿತ್ಯಾದಿ ಸಮಸ್ಯೆಗಳ ಮೇಲೆ ಇಂಜಿನಿಯರುಗಳು ಕೂಡ ಕೆಲಸ ಮಾಡಲಾರಂಭಿಸಿದರು ಎಂದು, ವಿಷಯದ ಹಲವು ಆಯಾಮಗಳನ್ನು ಸ್ಥೂಲವಾಗಿ ಹೇಳಿದರು. ಇದರ ಜೊತೆಗೆ, ಕಾನೂನಿನ ದೃಷ್ಟಿಯಿಂದಲೂ ಯಾರ ಹಕ್ಕು ಎಷ್ಟರ ಮಟ್ಟಿಗೆ ನದಿ ನೀರಿನ ಮೇಲಿದೆ ಎಂಬಂತಹ ವಿವಾದಗಳೂ ಹುಟ್ಟಿಕೊಂಡವು ಎಂದರು. 

ಮೊದಲಿಗೆ ಈ ವಿವಾದ ಅಮೆರಿಕ ಹಾಗೂ ಮೆಕ್ಸಿಕೋ ನಡುವೆ ಕೊಲರಾಡೊ ನದಿಯ ದಂಡೆಯಲ್ಲಿ ಅಣೆಕಟ್ಟನ್ನು ಕಟ್ಟಿದ ಮೇಲೆ ಉದ್ಭವವಾದವು. ಆ ಸಂದರ್ಭದಲ್ಲಿ ಹಾರ್ಮೋನ್ ಸಿದ್ಧಾಂತ, ಅಂದರೆ ಮೇಲೆ -ನದಿ ದಂಡೆಯಲ್ಲಿರುವ ರಾಜ್ಯಕ್ಕೆ ನದಿ ನೀರನ್ನು ತನ್ನ ತನಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳುವ ಸಂಪೂರ್ಣ ಹಕ್ಕಿದೆ ಎಂಬ ಸಿದ್ಧಾಂತವನ್ನು ಅಮೇರಿಕಾ ಮಂಡಿಸಿ ಲಾಭ ಪಡೆಯಿತು. ಈ ಸಿದ್ಧಾಂತದ ಮೂಲ, ಪ್ರತಿ ರಾಷ್ಟ್ರಕ್ಕೆ ಅದರದೇ ಆದ ಸಾರ್ವಭೌಮತೆಯ ಇದೆ ಎಂಬ ನೀತಿ ಎಂದು ತಿಳಿಸಿಕೊಟ್ಟರು. 

ಜಗತ್ತಿನ 261 ನದಿ ದಂಡೆಗಳು ಎರಡು ರಾಜ್ಯ ಅಥವಾ ಎರಡು ದೇಶಗಳ ನಡುವೆ ಹಾದು ಹೋಗಿದೆ ಎಂದು ಅವರು, ಅಮೆರಿಕಾದ ಸಿದ್ಧಾಂತಕ್ಕೆ ವಿರುದ್ಧವಾಗಿ  ನದಿನೀರನ್ನು ಕೆಳ ನದಿ ದಂಡೆಗಳಲ್ಲಿ ಬಳಸಿಕೊಂಡು ಬರುತ್ತಿದ್ದ ದೇಶಗಳು, ತಮ್ಮ ಹಕ್ಕಿನ ಕುರಿತು ಧ್ವನಿ ಎತ್ತಲಾರಂಭಿಸಿದ್ದರ ಬಗ್ಗೆ ಮಾತಾಡಿದರು. ನೈಸರ್ಗಿಕವಾಗಿ, ನದಿಯನ್ನು ಹರಿಯಲು ಬಿಡಬೇಕು ಅಂದು ನದಿಗಳ ಕೆಳ ಪಾತ್ರದ ಜನರು ಪ್ರತಿಪಾದಿಸಿ ಹುಟ್ಟಿದ ಸಿದ್ಧಾಂತವನ್ನು ವಿವರಿಸಿದರು. ಮೇಲ್ಮೆ ನದಿ ದಂಡೆಯಲ್ಲಿರುವ ರಾಜ್ಯಗಳು ನದಿ ನೀರನ್ನು ಕುಡಿಯುವುದಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು ಎಂಬ ಸಿದ್ಧಾಂತವು ರೂಪಗೊಂಡಿತು. ಈ ಸಿದ್ಧಾಂತವನ್ನು ಪ್ರಮುಖವಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ ಅನ್ವಯಿಸಲಾಗಿತ್ತು. ಹೀಗೆ ಎರಡೂ ಸಿದ್ಧಾಂತಗಳು ಸಂಪೂರ್ಣವಾಗಿ ಏಕಪಕ್ಷೀಯವಾಗಿ ಮೇಲಿನ ದಂಡೆಯ ಜನರಿಗೆ ಇಲ್ಲವೇ, ಕೆಳಗಿನ ದಂಡೆಯ ಜನರಿಗೆ ಮಾತ್ರ ಅನುಕೂಲವಾಗುವ ರೀತಿಯಲ್ಲಿ ಇತ್ತು.

ಇವೆರಡರ ನಡುವೆ ನೀರು ನಿಸರ್ಗ ನೀಡಿದ ಉಡುಗೊರೆ, ಎಲ್ಲರಿಗೂ ನದಿ ನೀರಿನ ಮೇಲೆ ಸಮನಾದ ಹಕ್ಕುಗಳಿವೆ ಎಂದು ಪ್ರತಿಪಾದಿಸುವಂತಹ ದೇಶಗಳ ನಡುವಿನ ಸಮಾನತೆಯ ಸಿದ್ಧಾಂತ ಜೀವ ಪಡೆಯಿತು ಎಂದರು. ವೆಸ್ಟ್ ಫಾಲಿಯ ಒಪ್ಪಂದದ ಆಧಾರದಲ್ಲಿ ಹುಟ್ಟಿಕೊಂಡ ಈ ಸಿದ್ಧಾಂತ ಎರಡೂ ಭಾಗದ ಜನರಿಗೆ, ಯಾವ ರೀತಿಯ ಅಗತ್ಯಗಳಿವೆಯೋ, ಆ ಅಗತ್ಯಗಳ ಮೇಲೆ ನದಿ ನೀರಿನ ಹಂಚಿಕೆಯಾಗಬೇಕೆಂದು ಹೇಳುತ್ತದೆ. 

ಆದರೂ, ನದಿ ಹಂಚಿಕೆಯ ವಿಚಾರವು ಅಷ್ಟು ಸುಲಭವಲ್ಲ. ರಾಜ್ಯಗಳ ನಡುವೆ ಒಟ್ಟೂ ನೀರಿನ ಪ್ರಮಾಣವನ್ನು ಸಮನಾಗಿ ಹಂಚಿಕೆ ಮಾಡುವ ಬದಲು, ಸಮಂಜಸವಾಗಿ ಹಂಚಿಕೆ ಮಾಡಬೇಕಾಗುತ್ತದೆ ಎಂದರು. ನದಿ ನೀರಿನ ಹಂಚಿಕೆಯ ವಿಚಾರವು ಪ್ರತಿ ನದಿಗೂ ವಿಶಿಷ್ಟವಾಗಿದೆ ಎಂದರು ಶ್ರೀಯುತರು. ಇತ್ತೀಚಿಗೆ ಈ ಕ್ಷೇತ್ರದಲ್ಲಿ ಹಲವಾರು ಸಿದ್ಧಾಂತಗಳು ಹುಟ್ಟಿ ಬಂದಿದ್ದು, ದಂಡೆಗಳ ಮೇಲಿನ ಜನರ ಆರ್ಥಿಕ ಪರಿಸ್ಥಿತಿ, ತಂತ್ರಜ್ಞಾನ ಬೆಳವಣಿಗೆ, ಉದ್ಯಮ, ಪರಿಸರದ ಕಾಳಜಿ ಇವೆಲ್ಲ ವಿಚಾರಗಳು ನೀರಿನ ಹಂಚಿಕೆಯ ವಿಚಾರದಲ್ಲಿ ಪ್ರಸ್ತುತವಾಗುತ್ತವೆ ಎಂದರು. 

ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಸದ್ಯದಲ್ಲಿ ಚಾಲನೆಯಲ್ಲಿರುವ ಸಿದ್ಧಾಂತವೆಂದರೆ, ಸಮಾನತೆಯ ಪಾಲು ಸಿದ್ಧಾಂತ (Doctrine Of Equitable Apportionment). ಇದರ ಪ್ರಕಾರ ನದಿ ಹರಿಯುವ ಪ್ರತಿಯೊಂದು ರಾಜ್ಯವೂ ನೀರು  ಉಪಯೋಗಿಸುವುದಕ್ಕೆ ಪಾಲುದಾರರಾಗಿರುತ್ತಾರೆ ಮತ್ತು ನೀರನ್ನು ನ್ಯಾಯಸಮ್ಮತವಾಗಿ ಹಂಚುವ ಪ್ರಯತ್ನವೂ ಇದಾಗಿದೆ ಎಂದು ತಿಳಿಸಿಕೊಟ್ಟರು. 

ಹಾಗೆ ಮುಂದುವರಿಸುತ್ತಾ ಮೋಹನ್ ಕಾತರಕಿ ಅವರು ಕಾವೇರಿ ನದಿ ಹಂಚಿಕೆಯ ವಿಚಾರದಲ್ಲಿ ತಾವು ನ್ಯಾಯಾಲಯದಲ್ಲಿ ಮಂಡಿಸಿದ ವಾದಗಳನ್ನು ಬಿಚ್ಚಿಟ್ಟರು. 1910 ನಲ್ಲಿ ತಮಿಳುನಾಡು  11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿತ್ತು, ಮೆಟ್ಟೂರ್ ಅಣೆಕಟ್ಟನ್ನು ಕಟ್ಟಿದ ನಂತರ ಇದರ ಸಂಖ್ಯೆ 28 ಲಕ್ಷ ಹೆಕ್ಟೇರ್ ವ್ಯವಸಾಯ ಆಯಿತು ಎಂದು ತಮಿಳು ನಾಡು ವಾದ ಮಂಡಿಸಿತು. ಕರ್ನಾಟಕ ಈ ವಾದವನ್ನು ಅಲ್ಲಗಳೆದು, ತಮಿಳು ನಾಡು ಕೇವಲ 20 ಲಕ್ಷ ಹೆಕ್ಟೇರ್ ಮಾತ್ರ ವ್ಯವಸಾಯ ಮಾಡುತ್ತಿದೆ ಎಂದು ವಾದ ಮಂಡಿಸಿತು. ಜೊತೆಗೆ, ವರ್ಷಕ್ಕೆ 2 ಮಳೆ ಬೀಳುವುದರಲ್ಲಿ ತಮಿಳುನಾಡಿನಲ್ಲಿ ಈಶಾನ್ಯ ಮಳೆಯೂ ಮತ್ತು ಕರ್ನಾಟಕದಲ್ಲಿ ನೈಋತ್ಯ ಮಳೆಯೂ ಬೀಳುತ್ತದೆ, ಹಾಗಾಗಿ, ತಮಿಳುನಾಡು ಈಶಾನ್ಯ ಮಳೆಯಾಗುವ ಮುನ್ನ ಯಾವುದೇ ಬೆಳೆಯನ್ನು ಬೆಳೆಯಬಾರದು ಎಂಬ ವಾದವನ್ನೂ ಮುಂದಿಟ್ಟಿತು. ಇದಕ್ಕೆ ಕಾರಣವೆಂದರೆ, ಜೂನ್ ಮತ್ತು ಜೂಲೈ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುವ ಸಂದರ್ಭದಲ್ಲಿ ತಮಿಳು ನಾಡಿನಲ್ಲಿ ಯಾವ ಮಳೆಯೂ ಇರುವುದಿಲ್ಲ, ಹಾಗಾಗಿ ಆಗ ಬೆಲೆ ಬೆಳೆದರೆ ನೂರು ಶತಮಾನ ನೀರಾವರಿಯನ್ನು ಅವಲಂಬಿಸಬೇಕಾಗುತ್ತದೆ, ಇದು ವಾತಾವರಣಕ್ಕೆ ವಿರುದ್ಧವಾದ ಬೇಸಾಯ, ಅದರ ಬದಲು ಸಪ್ಟೆಂಬರ್ ನಲ್ಲಿ ಅಲ್ಲಿ ಮಳೆಯಾಗುವ ಹೊತ್ತಿಗೆ, ಅವರಿಗೆ ಅಗತ್ಯವಿರುವಷ್ಟು ನೀರನ್ನು ಬಿಟ್ಟರೆ ಅದು ಎರಡೂ ರಾಜ್ಯಗಳಿಗೆ ಒಳಿತು ಎಂದು ಕರ್ನಾಟಕ ವಾದಿಸಿತು. ಕುರುವಾಯಿ ಎಂಬ ಹೆಚ್ಚಿನ ನೀರು ಬೇಕಿರುವ ಅಕ್ಕಿಯನ್ನು ಐತಿಹಾಸಿಕವಾಗಿ ಬೆಳೆಯುತ್ತಾ ಬಂದಿದೆ ತಾನು ಎಂದು ತಮಿಳು ನಾಡು ಪ್ರತಿವಾದ ಮಂಡಿಸಿತು. ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿಕೊಂಡ  ನ್ಯಾಯಾಧಿಕರಣ ಕೇವಲ ಮೂರೂವರೆ ಲಕ್ಷ ಹೆಕ್ಟಾರ್ ಕುರುವಾಯಿ ಬೆಳೆಯಲು ಅನುಮತಿಯನ್ನು ನಿರಾಕರಿಸಿತು. ಮಹಾಪಾತ್ರ ಎಂಬ ತಜ್ಞರ ಹೇಳಿಕೆಯ ಮೇರೆಗೆ ಸಾಂಬಾ ಅಕ್ಕಿ ತಳಿಯನ್ನು ಬೆಳೆದು ರೈತರಿಗೆ ಆದ  ನಷ್ಟ ತುಂಬಬಹುದು ಎಂದೂ ಕರ್ನಾಟಕ ಸೂಚಿಸಿದ ವಾದವನ್ನು ಕೆಲ ಮಟ್ಟಿಗೆ ಒಪ್ಪಿಕೊಳ್ಳಲಾಯಿತು ಎಂದರು.

ನದಿ ನೀರಿನ ವಿವಾದಗಳು ರಾಜ್ಯದ ಒಳಗಡೆ ಹುಟ್ಟಿಕೊಂಡಾಗ ಬಗೆಹರಿಸವಂತೆ ಸುಲಭವಾಗಿ ರಾಜ್ಯ ರಾಜ್ಯಗಳ ನಡುವೆ ಅಥವಾ ದೇಶ ದೇಶಗಳ ನಡುವೆ ಹುಟ್ಟಿಕೊಂಡಾಗ ಬಗೆಹರಿಸುವುದು ಅಷ್ಟು ಸುಲಭವಲ್ಲ ಎಂದ ಶ್ರೀಯುತರು, ಸಿಂಧೂ ನದಿಯ ಉದಾಹರಣೆಯನ್ನು ಕೊಟ್ಟರು, ಭಾರತ ಮತ್ತು ಪಾಕಿಸ್ತಾನ ಈ ವಿಚಾರದಲ್ಲಿ 1960 ರಲ್ಲಿ ಒಂದು ಒಪ್ಪಂದಕ್ಕೆ ಬಂದದ್ದನ್ನು ನೆನಪಿಸಿಕೊಂಡರು. ಮುಂದುವರಿದು, ಭಾರತ ಹಾಗೂ  ಚೀನಾ ನಡುವಿನ ಬ್ರಹ್ಮಪುತ್ರ ನದಿಯ ವಿವಾದವನ್ನು ವಿವರಿಸಿದರು. ಸಿಂಧೂ ನದಿಯ ವಿಚಾರದಲ್ಲಿ ಮೇಲ್ದಂಡೆಯ ದೇಶವಾಗಿದ್ದ ನಾವು ಬ್ರಹ್ಮಪುತ್ರದ ವಿಚಾರದಲ್ಲಿ ಕೇಳದಂಡೆಯ ದೇಶದವರು ಮತ್ತು ಆ ರೀತಿಯಲ್ಲಿ ನಾವು ಸಮಸ್ಯೆಯನ್ನು ನೋಡುವ ರೀತಿ ಬದಲಾಗುತ್ತದೆ ಎಂದರು. ಜೊತೆಗೇ, ಬ್ರಹ್ಮಪುತ್ರ ನದಿ ದಂಡೆಯಲ್ಲಿರುವ ದೇಶಗಳು ಆದಷ್ಟು ಬೇಗ ಈ ಕುರಿತು ಒಂದು ಒಪ್ಪಂದಕ್ಕೆ ಬರಬೇಕು ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು. ಹವಾಮಾನ ಬದಲಾವಣೆಯ ಕುರಿತು ತಜ್ಞರ ಊಹೆ ನಿಜವಾದರೆ, ಚೀನಾ ನದಿಯ ನೀರನ್ನು ಬೇರೆಡೆಗೆ ಹರಿಸುವ ಯೋಜನೆ ತಂದರೆ, ಬ್ರಹ್ಮಪುತ್ರ ನದಿಯಿಂದ ನೀರು ಪಡೆಯುವುದು ಇನ್ನಷ್ಟು ಕಷ್ಟವಾಗುತ್ತದೆ ಎಂದರು. 

ಕರ್ನಾಟಕದ ನದಿಗಳ ಕುರಿತು ಇನ್ನಷ್ಟು ಮಾಹಿತಿ ನೀಡುತ್ತಾ ಕಾತರಕಿಯವರು, ಪ್ರಮುಖವಾಗಿ ಎರಡು ಕೃಷ್ಣ ಹಾಗೂ ಕಾವೇರಿ ಜಲಾನಯನಗಳು ಇವೆ, ಅಂಕಿ-ಅಂಶಗಳ ಪ್ರಕಾರ ಕೃಷ್ಣಾ ನದಿಯು ಕರ್ನಾಟಕದಲ್ಲಿ 2/3 ರಷ್ಟು ಪ್ರದೇಶಕ್ಕೆ ಜೀವಾಳವಾಗಿದೆ. ಹಾಗೆ 1/3 ರಷ್ಟು ಕರ್ನಾಟಕದ ಪ್ರದೇಶಕ್ಕೆಕಾವೇರಿ ಜೀವಾಳವಾಗಿದೆ. ಕೃಷ್ಣಾನದಿಯಿಂದ 734 ಟಿಎಂಸಿ ಮತ್ತು ಕಾವೇರಿ ನದಿಯಿಂದ 248 ಟಿಎಂಸಿ ಯಷ್ಟು ನೀರು ನ್ಯಾಯಾಲಯದ ಪ್ರಕಾರ ಬಳಕೆ ಮಾಡಿಕೊಳ್ಳಬಹುದು. ಆದರೆ ನಮಗೆ ಸಿಗುವ ಪೂರ್ಣಪ್ರಮಾಣದ ನೀರನ್ನು ಉಪಯೋಗಿಸುತ್ತಿಲ್ಲ. ಅದಕ್ಕೆ ಕಾರಣ ಕರ್ನಾಟಕ ರಾಜ್ಯ ವ್ಯವಸಾಯದ ಮೇಲೆ ಅಷ್ಟು ಹಣ ಖರ್ಚು ಮಾಡುತ್ತಿಲ್ಲ. ಏಕೆಂದರೆ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಇರುವ ಜಾಗದಲ್ಲಿ ಕರ್ನಾಟಕವು ಕೇವಲ 12 ಸಾವಿರ ಕೋಟಿಯನ್ನು ಮಾತ್ರ ವ್ಯವಸಾಯಕ್ಕೆ ಮೀಸಲಿಟ್ಟಿದೆ. ಹಾಗೆ ಆಲಮಟ್ಟಿ ಜಲಾಶಯವನ್ನು 524 ಮೀಟರ್ ಅಡಿ ಎತ್ತರದ ತನಕ ಹೆಚ್ಚಿಸಲು  ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ಹೀಗಾದರೆ ಇದು ಕರ್ನಾಟಕದ ಅತಿ ದೊಡ್ಡ ಜಲಾಶಯವಾಗುವುದು ಎಂದರು.

ಹಾಗೆ ಕರ್ನಾಟಕದಲ್ಲಿ ಇರುವ ಸುಮಾರು ನದಿಗಳಲ್ಲಿ ಉದಾಹರಣೆಗೆ, ನೇತ್ರಾವತಿ, ಕಾಳಿ ಇತ್ಯಾದಿಗಳಲ್ಲಿ ನೀರಿನ ಪ್ರಮಾಣವು 3000 ಟಿಎಂಸಿ  ಹರಿಯುತ್ತದೆ. ಆದರೆ ಅದರ ಸಮರ್ಪಕ ಬಳಕೆ ಕರ್ನಾಟಕವು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ಒಂದು ಟಿಎಂಸಿ ನೀರು ಶೇಖರಣೆ ಅಥವಾ ಬಳಕೆಗೆ 250 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ  ಎಂದು ತಿಳಿಸಿದ ಅವರು, ನೀರಾವರಿ ಮತ್ತು ಬೇಸಾಯದ ವಿಚಾರದಲ್ಲಿ ಕರ್ನಾಟಕ ಮಾಡಬೇಕಾಗರುವುದು ಇನ್ನೂ ಸಾಕಷ್ಟಿದೆ ಎಂದರು. 

ಕೊನೆಯಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಮಾತನ್ನು ಮುಗಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಕೆ .ಆರ್. ವೇಣುಗೋಪಾಲ್ ಹಾಗೂ ಕಾನೂನು ಸಹ ಪ್ರಾಧ್ಯಪಕರು ಮತ್ತು ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾದ ಡಾ. ಸತೀಶ ಗೌಡ್ ಎನ್.ರವರು  ಉಪಸ್ಥಿತರಿದ್ದರು.

ವರದಿ :  ಪ್ರಕಾಶ ಪತ್ತಾರ (ಬೆಂಗಳೂರು ಎನ್. ಎಸ್. ಎಸ್. ಘಟಕದ ಅನುಮತಿಯೊಂದಿಗೆ)

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸುತ್ತಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಪ್ರಕಾಶ ಪತ್ತಾರ

ಪ್ರಕಾಶ ಪತ್ತಾರ ಮೂಲತಃ ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದವರಾಗಿದ್ದು, ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾರೆ.

Spread the love