ಜ್ಞಾನ ನಿಂತ ನೀರಲ್ಲ. ಅದು ಒಬ್ಬರಿಂದ ಒಬ್ಬರಿಗೆ ಹರಿದಷ್ಟೂ ಪವಿತ್ರ, ಸ್ಪುಟ ಮತ್ತು ಉಪಯೋಗಕಾರಿ ಎಂದು ನ್ಯಾಯನಿಷ್ಠ ನಂಬುತ್ತದೆ. ಹಾಗೆಯೇ, ಸಮಾಜದ ಎಲ್ಲ ಮೂಲೆ – ಮೂಲೆಗಳಿಂದ ಹರಿದುಬರುವ ವೈವಿಧ್ಯಮಯವಾದ ಅರಿವುಗಳನ್ನು, ಅವುಗಳ ವಿಶ್ಲೇಷಣೆ – ಅರ್ಥೈಸುವಿಕೆಗಳನ್ನು ಕಲೆಹಾಕುವುದು ಕಾನೂನು ಸಾಹಿತ್ಯ ಬೆಳವಣಿಗೆಯ ಮೊದಲ ಹಂತ. ಹಾಗಾಗಿ, ಕನ್ನಡದಲ್ಲಿ ಕಾನೂನು ವಿಷಯಗಳ ಕುರಿತು ಬರೆಯಲು ನಿಮಗೆ ಆಸಕ್ತಿ ಇದ್ದಲ್ಲಿ, ನಿಮಗೊಂದು ವೇದಿಕೆ ಕಲ್ಪಿಸಲು ನ್ಯಾಯನಿಷ್ಠ ಕಟಿಬದ್ಧ.
ವಿದ್ಯಾರ್ಥಿಗಳು, ನ್ಯಾಯವಾದಿಗಳು, ಸಾಮಾಜಿಕ ಕಾರ್ಯಕರ್ತರು, ಸರಕಾರೀ- ಖಾಸಗೀ ಉದ್ಯೋಗಿಗಳು, ಗೃಹಿಣಿಯರು, ಕೃಷಿಕರು ಅಥವಾ ಸಮಾಜದ ಇನ್ನಾವುದೇ ವೃತ್ತಿ – ಪ್ರವೃತ್ತಿಯಲ್ಲಿ ತೊಡಗಿಕೊಂಡವರೂ ಸಹ ಬರೆಯಬಹುದು. ಹೊಸ – ಹಳೆಯ ಕಾಯ್ದೆಗಳ ಕುರಿತು, ನ್ಯಾಯಾಲಯಗಳ ತೀರ್ಪುಗಳ ಕುರಿತು, ಪುಸ್ತಕಗಳ ಕುರಿತು, ಅಥವಾ ಹೊಸ ಕಾಯ್ದೆಗಳ ಕೊರತೆಯ ಕುರಿತು ಅಥವಾ ಕಾನೂನಿನ ಯಾವುದೇ ಮಜಲನ್ನು ಹೊಂದಿದ ಸಾಮಾಜಿಕ ಸಮಸ್ಯೆಗಳ ಕುರಿತು ನೀವು ಬರೆಯಬಹುದು. 600- 800 ಪದಗಳವರೆಗಿನ ನಿಮ್ಮ ಲೇಖನವನ್ನು ಕಳುಹಿಸಬೇಕಾದ ಇ- ವಿಳಾಸ – [email protected]