ನಮ್ಮ ಕುರಿತು

ನ್ಯಾಯನಿಷ್ಠ, ಕಾನೂನು ಲೋಕದಲ್ಲಿ ಅಂಬೆಗಾಲಿಡುತ್ತಿರುವ ವೃತ್ತಿಪರರ ಒಂದು ಪುಟ್ಟ ಬಳಗ. ಕನ್ನಡದಲ್ಲಿ ಕಾನೂನಿನ ಕುರಿತಾದ ಸಾಹಿತ್ಯದ ಅಭಾವವನ್ನು ಮನಗಂಡು ಈ ಪ್ರಯತ್ನವನ್ನು ಆರಂಭಿಸಿದ್ದೇವೆ. ಹೊಸ ಕಾಯ್ದೆಗಳು, ತಿದ್ದುಪಡಿಗಳು, ತೀರ್ಪುಗಳು ಹಾಗೂ ಮತ್ತು ಸಾಮಾಜಿಕ ವಿಷಯಗಳನ್ನು ಕಾನೂನಿನ ದೃಷ್ಠಿಯಿಂದ ಅವಲೋಕಿಸಿ ಅಥವಾ ವಿಶ್ಲೇಷಿಸಿ ನಿಮ್ಮ ಮುಂದಿಡುವುದು ನಮ್ಮ ಸದ್ಯದ ಆಶಯವಾಗಿದೆ. ಯಾವುದೇ ರೀತಿಯ ರಾಜಕೀಯ ಅಥವಾ ಸಾಮಾಜಿಕ ಪಕ್ಷಪಾತವಿಲ್ಲದೆ ಕೇವಲ ಕಾನೂನಿನ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಯ ಕನಸನ್ನು ಮಾತ್ರ ಹೊತ್ತು ನಾವು ನಿಮ್ಮ ಮುಂದೆ ಬಂದಿದ್ದೇವೆ.
ಅಷ್ಟೇ ಅಲ್ಲದೆ ಕನ್ನಡ ಮಾಧ್ಯಮದಲ್ಲಿ ಓದಿದ ಹಾಗೂ ಓದುತ್ತಿರುವ ಎಷ್ಟೋ ವಿದ್ಯಾರ್ಥಿಗಳ ಮತ್ತು ನ್ಯಾಯವಾದಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಕೂಡ ನಮ್ಮ ಆಶಯವಾಗಿದೆ. ಕನ್ನಡದ ಮೂಲಕ ಸರಳವಾದ ಭಾಷೆಯಲ್ಲಿ ಕಾನೂನಿನ ಸಂಕೀರ್ಣ ವಿಷಯಗಳನ್ನು ಪ್ರಸ್ತುತಪಡಿಸಿ, ಜನರಲ್ಲಿ ಕಾನೂನಿನ ಕುರಿತು ಹೆಚ್ಚು ಅರಿವು ಮೂಡಿಸುವುದೂ ಸಹ ನಮ್ಮ ಉದ್ಧೇಶವಾಗಿದೆ.
ಓದಿ, ಲೈಕ್ ಮಾಡಿ, ಪ್ರಸರಿಸಿ ಹಾಗೂ ಆಶೀರ್ವದಿಸಿ.

ನಮ್ಮ ಬಳಗ :

ಮೈತ್ರೇಯಿ ಸಚ್ಚಿದಾನಂದ ಹೆಗಡೆ – ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರು
ಗುರುರಾಜ್ ಆರ್. – ಸಹಸಂಸ್ಥಾಪಕರು ಮತ್ತು ಉಪ ಸಂಪಾದಕರು
ವಾಸವಿ ಹೆಗಡೆ – ಸಹಸಂಸ್ಥಾಪಕರು ಮತ್ತು ಉಪ ಸಂಪಾದಕರು
ಸ್ಮಿತಾ ಅಂಗಡಿ – ಸಹಸಂಸ್ಥಾಪಕರು ಮತ್ತು ಉಪ ಸಂಪಾದಕರು
ನೇತ್ರಾ ಕೊಪ್ಪದ – ಸಹಸಂಸ್ಥಾಪಕರು ಮತ್ತು ಉಪ ಸಂಪಾದಕರು

Spread the love