ಸಂದರ್ಶನಗಳು

ಸಂದರ್ಶನ | ಕರ್ನಾಟಕ ಭೂ ಸುಧಾರಣಾ ಕಾಯ್ದೆ | Karnataka Land Reforms | ಶಶಿಭೂಷಣ ಹೆಗಡೆ |Shashibhushan Hegde

13.07.2020ರಂದು ಜಾರಿಯಾದ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಅಧ್ಯಾದೇಶ, 2020 ರಾಜ್ಯದಲ್ಲಿ ಪರ- ವಿರೋಧ ಅಲೆಗಳನ್ನು ಎಬ್ಬಿಸಿವೆ. ಈ ನಿಟ್ಟಿನಲ್ಲಿ ನ್ಯಾಯನಿಷ್ಠ ‘ಭೂಸುಧಾರಣೆಯಲ್ಲಿ ಬದಲಾವಣೆ: ಭೂಮಿಪುತ್ರರ ಬದುಕು ಬದಲಿಸೀತೇ?’ ಎಂಬ ಶೀರ್ಷಿಕೆಯಲ್ಲಿ ಈಗಾಗಲೇ ಅಂಕಣವನ್ನು ಪ್ರಕಟಿಸಿದೆ. ಆ ನಿಲುವಿಗೆ ಪರ್ಯಾಯವಾದ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರೆ ಮಾತ್ರ ಸಂಪೂರ್ಣವಾದ ಚಿತ್ರಣ ನಮ್ಮ ಓದುಗರಿಗೆ / ನೋಡುಗರಿಗೆ ಸಿಗುತ್ತದೆ ಎಂಬ ದೃಷ್ಟಿಯಿಂದ ನಾವು, ಶ್ರೀ. ಶಶಿಭೂಷಣ ಹೆಗಡೆಯವರೊಂದಿಗೆ ಮಾತಿಗೆ ಕುಳಿತಿದ್ದು.

ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಯುವ ನೇತಾರರಾಗಿದ್ದು, ಸ್ವತಃ ಕೃಷಿಕರೂ ಆಗಿದ್ದಾರೆ. ಕೃಷಿ ಹಾಗೂ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ.

ಹೆಗಡೆಯವರು ಸಂದರ್ಶನದಲ್ಲಿ ಕಾಯ್ದೆಯಿಂದಾಗುವ ಪ್ರಮುಖ ಬದಲಾವಣೆಗಳು, ರೈತರ ಮೇಲಾಗುವ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳು, ಕಾಯ್ದೆಯನ್ನು ಮಾರ್ಪಾಡು ಮಾಡುವ ಅಗತ್ಯ ಮತ್ತು ನಮ್ಮ ಮುಂದಿರುವ ದಾರಿಯ ಕುರಿತು ಮಾತನಾಡಿದ್ದಾರೆ.

ನ್ಯಾಯನಿಷ್ಠದ ವತಿಯಿಂದ ಹೆಗಡೆಯವರಿಗೆ ತುಂಬು ಹೃದಯದ ಧನ್ಯವಾದಗಳು.

ಇದನ್ನೂ ಓದಿ : http://www.nyayanishta.com/archives/161

Spread the love