ಸಂದರ್ಶನಗಳು

ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ | Draft EIA Notification, 2020 | ಡಾ. ಕೇಶವ ಹೆಚ್. ಕೊರ್ಸೆ

ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ, 2020 (Environment Impact Assessment Notification, 2020) ಈಗ ಜನರ ಅಭಿಪ್ರಾಯ / ಸ್ಪಂದನೆಗಳಿಗೆ ಮುಕ್ತವಾಗಿದೆ. ಇದರ ಕುರಿತು ಡಾ. ಕೇಶವ ಹೆಚ್. ಕೊರ್ಸೆ ನ್ಯಾಯನಿಷ್ಠದ ಜೊತೆ ಮಾತನಾಡಿದ್ದಾರೆ. ಡಾ. ಕೊರ್ಸೆಯವರು ಜೀವಿ-ಪರಿಸರ-ಸಸ್ಯ ವಿಜ್ಞಾನಿ ಹಾಗೂ ಶಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾರೆ. ಅವರು ಕರ್ನಾಟಕ ಸರಕಾರ ಇತ್ತೀಚೆಗೆ ರಚಿಸಿದ ಭೂಕುಸಿತ ಅಧ್ಯಯನ ಸಮಿತಿಯ ಸದಸ್ಯರೂ ಆಗಿದ್ದಾರೆ. ಡಾ. ಕೊರ್ಸೆಯವರು ಅಧಿಸೂಚನೆ ತರುತ್ತಿರುವ ಪ್ರಮುಖ ಬದಲಾವಣೆಗಳು, ಪರಿಸರ ಕಾನೂನುಗಳ ಮೇಲೆ ಅಧಿಸೂಚನೆಯ ಒಟ್ಟು ಪರಿಣಾಮಗಳು, ಪರಿಸರ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಮತ್ತು ಭಾರತೀಯ ಯುವ ಸಮುದಾಯದ ಅವಲೋಕನವನ್ನು ಮಾಡಿದ್ದಾರೆ.

ದಯವಿಟ್ಟು ಗಮನಿಸಿ: ಕರಡು ಅಧಿಸೂಚನೆಗೆ ಆಕ್ಷೇಪ ಹಾಗೂ ತಿದ್ದುಪಡಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ ೧೧, ೨೦೨೦

ನ್ಯಾಯನಿಷ್ಠದ ವತಿಯಿಂದ ಡಾ. ಕೊರ್ಸೆಯವರಿಗೆ ತುಂಬುಹೃದಯದ ಧನ್ಯವಾದಗಳು.

ಇವನ್ನೂ ಓದಿ : http://www.nyayanishta.com/archives/260 http://www.nyayanishta.com/archives/175

Spread the love